ಆರೋಗ್ಯ

Health

ಪ್ರತಿ ವ್ಯಕ್ತಿ ಹಾಗೂ ಪ್ರತಿ ಕುಟುಂಬವು ಉತ್ತಮ ಆರೋಗ್ಯದ ಹಕ್ಕನ್ನು ಹೊಂದಿದೆ ಎಂದು ನಾವು ನಂಬಿದ್ದೇವೆ

ಒಂದು ಸಮಗ್ರ ಮತ್ತು ಸಹಯೋಗದ ಮಾರ್ಗದಿಂದ, ನಾವು ಸಮುದಾಯದ ಆರೋಗ್ಯ ಆಚರಣೆಗಳನ್ನು ಸುಧಾರಿಸುತ್ತೇವೆ ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ಸುಲಭವಾಗಿ ದೊರಕುವಂತೆ ಮಾಡುತ್ತೇವೆ.

ಆರೋಗ್ಯ ಒಂದು ಸಾರ್ವಜನಿಕ ಒಳಿತು. ಆರೋಗ್ಯ ಸೇವೆಗಳು ನಮ್ಮ ದೇಶದ ಪ್ರತಿ ಮೂಲೆ ಮೂಲೆಗೂ ತಲುಪಲು ಒಂದು ಸದೃಢ ಸಾರ್ವಜನಿಕ ವ್ಯವಸ್ಥೆಯ ಅಗತ್ಯವಿದೆ ಎಂದು ನಾವು ನಂಬಿದ್ದೇವೆ. ಸಮುದಾಯ ಆರೋಗ್ಯ, ಪ್ರಾಥಮಿಕ ಆರೋಗ್ಯ ಸೇವೆ, ದ್ವಿತೀಯ ಆಸ್ಪತ್ರೆಗಳು – ಹೀಗೆ ಸಾರ್ವಜನಿಕ ವ್ಯವಸ್ಥೆಯ ಎಲ್ಲ ಹಂತಗಳ ಸಾಮರ್ಥ್ಯ ಮತ್ತು ಕಾರ್ಯನಿರ್ವಹಣೆಯಲ್ಲಿ ಸುಧಾರಣೆಯನ್ನು ತರುವುದರ ಮೂಲಕ ವ್ಯವಸ್ಥೆಯನ್ನು ಬೆಂಬಲಿಸುವುದು ನಮ್ಮ ಮುಖ್ಯವಾದ ಕೆಲಸ. 2022ರಲ್ಲಿ ಪ್ರಾರಂಭಗೊಂಡ ಆರೋಗ್ಯ ಕ್ಷೇತ್ರದಲ್ಲಿನ ನಮ್ಮ ಕೆಲಸವು ಬಹಳ ವೇಗವಾಗಿ ವಿಸ್ತಾರಗೊಳ್ಳುತ್ತಿವೆ. ಈ ಕ್ಷೇತ್ರದಲ್ಲಿ ನಮ್ಮ ಮಾರ್ಗದರ್ಶಿ ತತ್ತ್ವಗಳು ಕೆಳಗಿನಂತಿವೆ: 

  • ವ್ಯಕ್ತಿಗಳು ಮತ್ತು ಕುಟುಂಬಗಳು ಆರೋಗ್ಯವಾಗಿ ಬದುಕಲು ನೆರವಾಗುವುದೇ ನಮ್ಮ ಗುರಿ; ನಮ್ಮ ಗುರಿಯು ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ
  •  ಇದಕ್ಕೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಆರೋಗ್ಯ ಸೇವೆಗಳಿಂದ ಬೆಂಬಲಿತವಾಗಿರುವಂತಹ, ಒಂದು ಸದೃಢ ಮುಂಚೂಣಿ ಸಮುದಾಯ ಆರೋಗ್ಯ ವ್ಯವಸ್ಥೆಯೊಂದರ ಅಗತ್ಯವಿದೆ.
  • ಈ ಉದ್ದೇಶವನ್ನು ಒಂದು ಪರಿಣಾಮಕಾರಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮಾತ್ರ, ಜನರಿಗೆ ಕೈಗೆಟುಕುವ ಮತ್ತು ದಶಕಗಳ ಕಾಲ ಸುಸ್ಥಿರವಾಗಿರಬಲ್ಲ ರೀತಿಯಲ್ಲಿ ದೇಶದ ಮೂಲೆ ಮೂಲೆಗೂ ಹರಡುವ ಮೂಲಕ, ಸಾಧಿಸಬಹುದು.
Community Health

ಆರೋಗ್ಯ ಕ್ಷೇತ್ರದಲ್ಲಿ ನಾವು ನಮ್ಮ ಕ್ಷೇತ್ರ ಸಂಸ್ಥೆಗಳ ಮೂಲಕ ನೇರವಾಗಿ ತಳಸ್ತರದಲ್ಲಿ ಕೆಲಸ ಮಾಡುತ್ತೇವೆ. ಸಹಯೋಗವು ನಮ್ಮ ಕೆಲಸಗಳ ಪ್ರಮುಖ ಅಂಶವಾದ್ದರಿಂದ, ತಲುಪಲು ಕಷ್ಟಸಾಧ್ಯವಾದ ಪ್ರದೇಶಗಳಲ್ಲಿ ಕೆಲಸ ಮಾಡುವ ಆರೋಗ್ಯ ಸಂಸ್ಥೆಗಳೊಂದಿಗೆ ಕೈಜೋಡಿಸುವುದಲ್ಲದೆ, ಅವುಗಳಿಗೆ ಅನುದಾನದ ರೂಪದಲ್ಲಿ ನೆರವು ನೀಡುತ್ತೇವೆ. 

ತಳಸ್ತರದ ಕೆಲಸ ಮಾತ್ರವಲ್ಲದೆ, ಶಿಕ್ಷಣದ ಮೂಲಕ ನಾವು ಮಾಹಿತಿಯುಕ್ತ, ನಿಪುಣ ಮತ್ತು ಸಮರ್ಪಣಾ ಭಾವದ ಆರೋಗ್ಯ ವಲಯ ಕಾರ್ಯಪಡೆಯನ್ನು ರೂಪಿಸಲು ನೆರವನ್ನು ಒದಗಿಸುತ್ತೇವೆ. ಈ ಕ್ಷೇತ್ರದಲ್ಲಿ ನಾವು ನಡೆಸುವ ಕ್ಷೇತ್ರ ಅಧ್ಯಯನಗಳು ಮತ್ತು ಸಂಶೋಧನಾ ಅನುದಾನಗಳು ತಳಸ್ತರದ ಪ್ರಾಯೋಗಿಕ ವಿಚಾರಗಳ ಮೇಲೆ ಗಮನ ಹರಿಸುತ್ತವೆ.

ಅಜೀಂ ಪ್ರೇಮ್‌ಜಿ ಹೆಲ್ತ್‌ ಈಕ್ವಿಟಿ ಫೆಲೊಷಿಪ್‌

ಶಿಶುವಿಹಾರ ಉಪಕ್ರಮ

ಆರೋಗ್ಯ ಅನುದಾನಗಳು

health-grant
ಸಿಎಮ್‌ಸಿ ವೆಲ್ಲೂರ್‌ನೊಂದಿಗೆ ಸಹಯೋಗ

ಸಾರ್ವಜನಿಕ ಆರೋಗ್ಯ ಶಿಕ್ಷಣ

ಸಂಶೋಧನೆ

ಆರೋಗ್ಯ ಸಂಶೋಧನಾ ಅನುದಾನಗಳು 2025

ತಳಸ್ತರದಲ್ಲಿ ಆರೋಗ್ಯ ಕಾರ್ಯ

ಗ್ರಾಮೀಣ ಆರೋಗ್ಯ ಕಾರ್ಯ

ನಗರ ಆರೋಗ್ಯ ಕಾರ್ಯ

ಮಧ್ಯಾಹ್ನದ ಬಿಸಿಯೂಟದಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುವುದು

ನಗರ ಆರೋಗ್ಯ ಕಾರ್ಯ ಬೆಂಗಳೂರಿನಲ್ಲಿ

ಗ್ರಾಮೀಣ

ಚಿತ್ರ ಕ್ರೆಡಿಟ್ - ಪುರುಸೊತ್ತಮ್ ಠಾಕೂರ್

ಗ್ರಾಮೀಣ ಬಾಲವಾಡಿ ಉಪಕ್ರಮ

ಒಂದು ಮಗುವಿನ ಬದುಕಿನ ಮೊದಲ 1,000 ದಿನಗಳ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಪೌಷ್ಟಿಕಾಂಶದ ಪಾತ್ರ ಮಹತ್ತರವಾದದ್ದು ಸಾಕಷ್ಟು ಪೌಷ್ಟಿಕಾಂಶ ಲಭಿಸದಿದ್ದರೆ ಮೆದುಳಿನ ಬೆಳವಣಿಗೆಯು ನಿಧಾನವಾಗುತ್ತದೆ ಮತ್ತು ಒಟ್ಟಾರೆ ದೈಹಿಕ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ.

ಗ್ರಾಮೀಣ ಭಾರತದಲ್ಲಿ, ಮುಖ್ಯವಾಗಿ ತಲುಪಲು ದುಸ್ತರವಾದ ಹಳ್ಳಿಗಳಲ್ಲಿ, ಏಳು ತಿಂಗಳಿನಿಂದ ಮೂರು ವರ್ಷ ವಯಸ್ಸಿನ ಅಂತರದಲ್ಲಿರುವ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಈ ಮಕ್ಕಳು ʼಟೇಕ್‌ ಹೋಮ್‌ ರೇಷನ್‌ʼ (ಟಿಎಚ್‌ಆರ್‌), ರೋಗನಿರೋಧಕ ಲಸಿಕೆ ಮತ್ತು ಆರೋಗ್ಯ ಸೇವೆಗಳನ್ನು ಪಡೆಯಲು ಅರ್ಹರಾಗಿದ್ದರೂ ಸಹ, ಅನೇಕ ಕಾರಣಗಳಿಂದ ಅವರು ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣಗಳಲ್ಲಿ ಪ್ರಮುಖವಾದುವು ಎಂದರೆ ಭೌಗೋಳಿಕ ಮತ್ತು ಮೂಲಸೌಕರ್ಯಗಳ ಸಮಸ್ಯೆಗಳು ಹಾಗೂ ಮಕ್ಕಳ ಆರೈಕೆದಾರರಲ್ಲಿ ಇರುವ ಅರಿವಿನ ಕೊರತೆ.

ಚಿತ್ರ ಕ್ರೆಡಿಟ್ - ಪುರುಸೊತ್ತಮ್ ಠಾಕೂರ್

ಅಷ್ಟೇ ಅಲ್ಲ. ಈ ಮಕ್ಕಳ ಪೋಷಕರು ಕೆಲಸಕ್ಕೆ ಹೋಗುವಾಗ ಅವರನ್ನು ಮನೆಯ ದೊಡ್ಡ ಮಕ್ಕಳೊಂದಿಗೆ ಅಥವಾ ಅಜ್ಜ-ಅಜ್ಜಿಯ ಜೊತೆ ಬಿಟ್ಟು ಹೋಗುತ್ತಾರೆ. ಇದು ಮಗುವಿಗೆ ಅವಶ್ಯವಿರುವ ಪೌಷ್ಟಿಕಾಂಶದ ಲಭ್ಯತೆಗೆ ಅಡ್ಡಿ ಮಾಡಿ, ಅದರ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.

A creche is a community-based centre run by an NGO where mothers leave their young children when they are at work. Creches seek to bridge the gap between children under three years of age and their access to proper nutrition, health and Early Childhood Development (ECD) interventions. The creches also enable the older siblings to continue schooling, and mothers to join the workforce.

 
 

Under our Rural Creche Initiative, we support the operations of creches across the Adivasi-dominated areas in Chhattisgarh, Jharkhand and Odisha, in partnership with civil society organisations (CSOs). So far, we have set up ~300 creches, and plan to set up and operate 7,000 to 8,000 creches in these states in a span of 10 years.

 
 

These creches – known as Shishu Ghar in Jharkhand and Odisha, and Laika Ghar in Chhattisgarh – are run in close coordination with the community. These provide daycare services for children aged six months to three years, for seven to eight hours a day, six days a week.

 
 

These centres, run by creche workers, provide one hot meal and snacks two times a day. They also regularly monitor the height and weight of children, and refer severely malnourished children to the Nutrition Resource Centre for medical support.

 
 

ಅನುದಾನ/ಸಂಶೋಧನೆ/ಶಿಕ್ಷಣ

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.